ಕೊಟ್ಟಿದ್ದ ಚಿನ್ನ, ಹಣ ವಾಪಸ್ ಕೇಳಿದ್ದೇ ತಪ್ಪಾಯ್ತಾ?; ಎಣ್ಣೆ ಕುಡಿಸಿ, ಕೊಲೆ ಮಾಡಿದ ಮಾಜಿ ಮನೆ ಕೆಲಸದಾಕೆ..Gujarat Woman Murder

Gujarat Woman Murder
Gujarat Woman Murder
Published on

ಪ್ರಮುಖ ಮುಖ್ಯಾಂಶಗಳು

  • ಎರಡು ಲಕ್ಷ ಹಣ, ಚಿನ್ನ ಕೊಟ್ಟಿದ್ದನ್ನು ವಾಪಸ್ ಕೇಳಿದ್ದಕ್ಕೆ ಕೊಲೆ
  • ಮದ್ಯ ಕುಡಿಸಿ, ಕೊಲೆ ಮಾಡಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಆರೋಪಿಗಳು
  • 15 ವರ್ಷದಿಂದ ಪರಿಚಯವಾಗಿದ್ದ ಮನೆಯೊಡತಿಯನ್ನೇ ಕೊಲೆ ಮಾಡಿದ ಪಾಪಿ
ಪಾಲನ್​ಪುರ: ಕೊಟ್ಟಿದ್ದ ಚಿನ್ನ ಮತ್ತು ನಗದು ವಾಪಸ್​ ಕೇಳಿದ್ದಕ್ಕೆ ಸಿಟ್ಟಾಗಿ ಮಾಜಿ ಕೆಲಸದಾಕೆಯೊಬ್ಬಳು(x-Househelp), ಸ್ನೇಹಿತೆಯಂತಿದ್ದ ಮನೆಯೊಡತಿಯನ್ನೇ ಕೊಂದ ಘಟನೆ ಗುಜರಾತ್‌ನ ಪಾಲನ್‌ಪುರದಲ್ಲಿ (Gujarat Woman Murder)ನಡೆದಿದೆ.
ಮೃತರು ಶಾಂತಿಬೆನ್​ ಅಕೇಡಿವಾಲಾ ಎಂದು ಗುರುತಿಸಲಾಗಿದೆ. ಆರೋಪಿ ರೇಖಾ ರಾಥೋಡ್ ಎಂಬಾಕೆ ಮತ್ತು ಅವರ ಪತಿ ತೇಜಭಾಯ್ ರಾಥೋಡ್ ಶಾಂತಿ ಬೆನ್​ರಿಗೆ ಮದ್ಯ ನೀಡಿ ಕೊಲೆ ಮಾಡಿದ್ದಾಗಿ ತಿಳಿದುಬಂದಿದೆ.
ಯಾರ್ಯಾರನ್ನು ಬಂಧಿಸಲಾಗಿದೆ?
ರೇಖಾ ರಾಥೋಡ್ ಮತ್ತು ಅವರ ಪತಿ ತೇಜಭಾಯ್ ರಾಥೋಡ್    ಮೂಲತಃ ಅಹಮದಾಬಾದ್‌ನವರಾಗಿದ್ದು, ಪ್ರಸ್ತುತ ಪಾಲನ್‌ಪುರದಲ್ಲಿ ವಾಸಿಸುತ್ತಿದ್ದಾರೆ. ಜೊತೆಗೆ ರೋಹಿತ್ ಮಕ್ವಾನಾ ಮತ್ತು ವಿಷ್ಣುಭಾಯ್ ವಾಲ್ಮೀಕಿಯನ್ನು ಪಾಲನ್​ಪುರ ನಗರ ಪಶ್ಚಿಮ​ ಪೊಲೀಸರ ವಶದಲ್ಲಿದ್ದಾರೆ ಎನ್ನಲಾಗಿದೆ.
ಮಾರ್ಚ್​ 22ರಂದು ಶಾಂತಿ ಬೆನ್​ ಕಾಣೆಯಾಗಿದ್ದರು ಆಕೆಯ ಕುಟುಂಬಸ್ಥರು ನೀಡಿದ ದೂರಿನ ಅನುಸಾರ ಪೊಲೀಸರು ಆಕೆಯನ್ನು ಪತ್ತೆಹಚ್ಚಲು ಹುಡುಕಾಟ ನಡೆಸಿದರು. ಈ ವೇಳೆ ಕೊಲೆ ವೃತ್ತಾಂತವು ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಏನಿದು ಘಟನೆ?

ಆರೋಪಿ ರೇಖಾ ರಾಥೋಡ್​ ಅವರು, ಶಾಂತಿ ಬೆನ್​ ಅವರ ಕುಟುಂಬದಲ್ಲಿ 15 ವರ್ಷಕ್ಕೂ ಹೆಚ್ಚು ಕಾಲ ಕೆಲಸ ಮಾಡಿದ್ದಳು.  ಮೊದಲು ಆಕೆಗೆ ಕೆಲಸದಾಕೆಯಾಗಿ ಪರಿಚಯವಾದ ಇವರು, ನಂತರ ಆಕೆಯ ಆಪ್ತ ಸ್ನೇಹಿತೆಯಾಗಿ ಬಿಟ್ಟರು. ಹೀಗೆ ಆಕೆಯ ಮನೆಯಲ್ಲಿ ಕೆಲಸ ಮಾಡೋದನ್ನು ಬಿಟ್ಟ ರೇಖಾ ರಾಥೋಡ್​ ಪಾಲನ್​ಪುರದಲ್ಲಿರುವ ಹನುಮಾನ್​ ಟೆಕ್ರಿ ರಸ್ತೆ ಬಳಿ ಪೀಠೋಪಕರಣ ಅಂಗಡಿಯನ್ನು ಇಟ್ಟು ಮಾರಾಟ ಮಾಡಲು ಶುರು ಮಾಡಿದರು. 

ವಾಪಸ್ ಕೇಳಿದ್ದೇ ತಪ್ಪಾಯ್ತಾ?

ಒಂದು ವರ್ಷದ ಹಿಂದೆ  ಶಾಂತಿ ಬೆನ್ ತನ್ನ ಗೆಳತಿ ರೇಖಾಳ ಬ್ಯುಸಿನೆಸ್​ನಲ್ಲಿ ಸಹಾಯ ಮಾಡಲು ಇಚ್ಛಿಸಿ  79 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 2 ಲಕ್ಷ ಹಣವನ್ನು ಸಾಲವಾಗಿ ನೀಡಿದ್ದರು.  ವ್ಯವಹಾರದಲ್ಲಿ ಲಾಭ ಕಂಡ ನಂತರ ವಾಪಸ್​ ಮಾಡೋದಾಗಿ ಆಕೆ ಹೇಳಿಕೊಂಡಿದ್ದರು. 
ಎಲ್ಲ ಚೆನ್ನಾಗಿಯೇ ಇದ್ದಾಗ ಶಾಂತಿ ಬೆನ್​  ತಾನು ಕೊಟ್ಟಿದ್ದ ಅಮೂಲ್ಯ ವಸ್ತುವನ್ನು ಕೇಳಿದರು.  ಆಗಲೇ ಕೊಲೆಗೆ ಸಂಚು ರೂಪಿಸಿದರು. ಶಾಂತಿ ಬೆನ್ ಜೊತೆ ಮಾತನಾಡುವುದಾಗಿ ಮಾರ್ಚ್ 22ರ ರಾತ್ರಿ ರೇಖಾ ಅವರ ಪೀಠೋಪಕರಣ ಅಂಗಡಿಗೆ ಕರೆಸಿಕೊಂಡಿದ್ದಳು ಮೊದಲು ಆಕೆ ಮದ್ಯ ಸೇವಿಸಲು ಕೊಟ್ಟು ಆ ನಂತರ ರೇಖಾ ಮತ್ತು ಆಕೆಯ ನಾಲ್ವರು ಸಹಾಯಕರು ಕ್ರೂರವಾಗಿ ಕೊಲೆ ಮಾಡಿದ್ದಾರೆ. 
ಇದನ್ನು ಓದಿ: 

ಕೊಲೆ ಪತ್ತೆ ಹಚ್ಚಿದ್ದೇಗೆ?

ಮೃತ ಶಾಂತಿ ಬೆನ್​ ದೇಹವನ್ನು ಕಂಬಳಿಯಲ್ಲಿ ಸುತ್ತಿ, ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಪಾಲನ್‌ಪುರದ ಆದಾಯ ತೆರಿಗೆ ಕಚೇರಿ ಬಳಿಯ ಮುಚ್ಚಿದ ಕಾಂಪೌಂಡ್‌ನ ಶಟರ್ ಅನ್ನು ಒಡೆದು, ಮೃತದೇಹವನ್ನು ಒಳಗೆ ಇರಿಸಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಾಕ್ಷ್ಯಗಳನ್ನು ನಾಶಮಾಡಲು ಯತ್ನಿಸಿದ್ದಾರೆ.

ಅಪರಾಧ ಒಪ್ಪಿಕೊಂಡ ಆರೋಪಿಗಳು

ಮಾರ್ಚ್ 23 ರಂದು ಶಾಂತಿಬೆನ್ ನಾಪತ್ತೆಯಾದ ಪ್ರಕರಣ ಬೆಳಕಿಗೆ ಬರುತ್ತಲೇ ಪೊಲೀಸರು ಎಚ್ಚೆತ್ತು ಹುಡುಕಾಟ ಶುರು ಮಾಡಿದರು.ನಂತರ ಸಿಸಿಟಿವಿ ದೃಶ್ಯಾವಳಿಗಳಲ್ಲಿ  ರೇಖಾಳ ಅಂಗಡಿಗೆ ಪ್ರವೇಶಿಸಿ ನಂತರ ಅಲ್ಲಿಂದ ಹೊರ ಬರದೇ ಇರುವುದು ಅನುಮಾನಕ್ಕೆ ಕಾರಣವಾಯ್ತು. ವಿಚಾರಣೆ ನಡೆಸಿದಾಗ ಆರೋಪಿಗಳಲ್ಲಿ ಒಬ್ಬನು ತಪ್ಪೊಪ್ಪಿಕೊಂಡಿದ್ದಾನೆ.
ಶಾಂತಿಬೆನ್ ಚಿನ್ನ ಮತ್ತು ಹಣವನ್ನು ಹಿಂದಿರುಗಿಸುವಂತೆ ಹೆಚ್ಚುತ್ತಿರುವ ಒತ್ತಡದಿಂದಾಗಿ ಕೊಲೆ ಮಾಡಲು ಯೋಜನೆ ರೂಪಿಸಲಾಯ್ತು ಎಂದು ತನಿಖೆಯಲ್ಲಿ ಬಾಯ್ಬಿಟ್ಟಿದ್ದಾರೆ. ಆರೋಪಿಗಳ ವಿರುದ್ಧ
ಕೊಲೆ, ಕ್ರಿಮಿನಲ್ ಪಿತೂರಿ ಮತ್ತು ಸಾಕ್ಷ್ಯ ನಾಶದ ಅಪರಾಧ ದಾಖಲಿಸಲಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net